Google+

Location

Authors

Name: Webdunia Kannada

Location: Not Available

Language: Not Available

Url: Not Available

ಸಚಿವ ಆಂಜನೇಯ ಕೊಠಡಿಯಲ್ಲಿ ಗಾಂಧೀಜಿ ಫೋಟೋ ಮೂಲೆಗೆಸೆದರು!

ಬೆಂಗಳೂರು : ಸಚಿವ ಆಂಜನೇಯ ಕೊಠಡಿಯಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿಗೆ ಅವಮಾನ ಮಾಡಿದ ಘಟನೆ ನಡೆದಿದೆ. ಹಳೆಯ ಸಾಮಾನುಗಳ ಕೊಠಡಿಯಲ್ಲಿ ಗಾಂಧಿ ಜೊತೆಗೆ ನೆಹರು ಫೋಟೊವನ್ನು ಇರಿಸಿ ರಾಹುಲ್, ಸಿದ್ದರಾಮಯ್ಯ ಅವರ ಫೋಟೋಗಳು ಮಾತ್ರ ರಾರಾಜಿಸುವಂತೆ ಮಾಡಿದ್ದಾರೆ. ಸಚಿವ ಆಂಜನೇಯ ಕೊಠಡಿಯ ಸಂದರ್ಭದಲ್ಲಿ ಆಂಜನೇಯ ಕೊಠಡಿಯ ನವೀಕರಣಕ್ಕೆ ಲಕ್ಷಾಂತರ ರೂ. ಖರ್ಚು ಮಾಡುತ್ತಿದ್ದಾರೆ.

1 0 0 0
Login to proceed

Cancel

Ok Cancel


Cancel
Hours
Cancel
ಮುರಳಿ ಮನೋಹರ್ ಜೋಷಿ ಕಾಲಿಗೆ ಬಿದ್ದು ನಮಸ್ಕರಿಸಿದ ನರೇಂದ್ರ ಮೋದಿ

ಬಿಜೆಪಿಯ ಪ್ರಧಾನಮಂತ್ರಿ ಅಭ್ಯರ್ಥಿ ನರೇಂದ್ರ ಮೋದಿ ಪ್ರಚಾರ ವೇದಿಕೆಯಲ್ಲಿಯೇ, ಪಕ್ಷದ ಹಿರಿಯ ನಾಯಕ ಮುರಳಿ ಮನೋಹರ ಜೋಶಿಯವರ ಕಾಲಿಗೆ ಬಿದ್ದು ನಮಸ್ಕರಿಸಿದ ಘಟನೆ ವರದಿಯಾಗಿದೆ.

1 0 0 0
Login to proceed

Cancel

Ok Cancel


Cancel
Hours
Cancel
ಲೈಂಗಿಕ ಕಿರುಕುಳ ಆರೋಪಿ ಕಂಡಕ್ಟರ್ ಕಮಲಾಕರ್ ನೇಣಿಗೆ ಶರಣು

ಕುಮಟಾ: ಕುಮಟಾದಲ್ಲಿ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಕಿರುಕುಳದ ಆರೋಪಿಯಾಗಿದ್ದ ಕಂಡಕ್ಟರ್ ಕಮಾಲಕರ್ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಏಪ್ರಿಲ್ 17ರಂದು ಬಾಲಕಿಯ ಪೋಷಕರು ಕಮಲಾಕರ್ ವಿರುದ್ಧ ಪ್ರಕರಣ ದಾಖಲಿಸಿದ್ದರು. ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆದರೆ ಇಂದು ಸಂಬಂಧಿಕರ ಮನೆಯಲ್ಲಿ ಕಮಲಾಕರ್ ಆತ್ಮಹತ್ಯೆಗೆ ಶರಣಾಗಿದ್ದಾನೆ. ಬಾಲಕಿಗೆ ಅಶ್ಲೀಲ ಎಸ್ಎಂಎಸ್ ಮೆಸೇಜ್‌ಗಳನ್ನು ಕೂಡ ಕಮಾಲಕರ್ ಕಳಿಸುತ್ತಿದ್ದ.

1 0 0 0
Login to proceed

Cancel

Ok Cancel


Cancel
Hours
Cancel
ಆಯೋಗದ ಕ್ಷಮೆ ಕೋರಲಾರೆ, ಆದ್ರೆ ಅಮಿತ್ ಶಾ ನಿಷೇಧ ತೆರುವುಗೊಳಿಸಿದ್ದು ಯಾಕೆ?: ಅಜಂ ಖಾನ್

ದ್ವೇಷದ ಭಾಷಣ ಕುರಿತಂತೆ ಚುನಾವಣೆ ಆಯೋಗದ ಕ್ಷಮೆಯಾಚಿಸಲು ನಿರಾಕರಿಸಿರುವ ಯುಪಿ ಸಚಿವ ಅಜಂ ಖಾನ್, ನನ್ನ ಹಾಗೆ ವಿವಾದ ಸೃಷ್ಟಿಸುವ ಹೇಳಿಕೆ ನೀಡಿದ್ದ ಅಮಿತ್ ಶಾ ಅವರ ಮೇಲಿನ ನಿಷೇಧವನ್ನು ಆಯೋಗ ಯಾಕೆ ಹಿಂತೆಗೆದುಕೊಂಡಿದೆ ಎಂದು ಪ್ರಶ್ನಿಸಿದ್ದಾರೆ.

1 0 0 0
Login to proceed

Cancel

Ok Cancel


Cancel
Hours
Cancel
ಅರವಿಂದ್ ಕೇಜ್ರಿವಾಲ್ ಕುಟುಂಬಕ್ಕೆ ಪ್ರವೇಶ ನಿರಾಕರಿಸಿದ ವಾರಣಾಸಿ ದೇವಾಲಯದ ಅಡಳಿತ ಮಂಡಳಿ

ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ ಕೇಜ್ರಿವಾಲ್ ಮತ್ತು ಅವರ ಪೋಷಕರು ಪವಿತ್ರ ನಗರ ವಾರಣಾಸಿಯ ಸಂಕಟ್ ಮೋಚನ್ ದೇವಸ್ಥಾನಕ್ಕೆ ಭೇಟಿ ನೀಡಿದಾಗ, ಆಡಳಿತ ಮಂಡಳಿಯಿಂದ ಹೊರ ಕಳುಹಿಸಲ್ಪಟ್ಟಿದ್ದಾರೆ ಎಂದು ವರದಿಯಾಗಿದೆ.

1 0 0 0
Login to proceed

Cancel

Ok Cancel


Cancel
Hours
Cancel
ಡಿಎಂಕೆ, ಎಐಡಿಎಂಕೆಗೆ ಬದ್ಧತೆಯಿಲ್ಲ: ಕೃಷ್ಣಗಿರಿಯಲ್ಲಿ ಸಿದ್ದರಾಮಯ್ಯ ಪ್ರಚಾರ

ಕೃಷ್ಣಗಿರಿ: ಕರ್ನಾಟಕದಲ್ಲಿ ಲೋಕಸಭೆ ಚುನಾವಣೆ ಮತದಾನ ಮುಗಿದ ಬಳಿಕ ಈಗ ತಮಿಳುನಾಡಿನ ಕೃಷ್ಣಗಿರಿಯಲ್ಲಿ ಕಾಂಗ್ರೆಸ್ ಪರ ಪ್ರಚಾರವನ್ನು ಸಿಎಂ ಸಿದ್ದರಾಮಯ್ಯ ಆರಂಭಿಸಿದರು. ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಬೇಕು ಎಂಬ ನಿರೀಕ್ಷೆಯಿಂದ ಇಲ್ಲಿಗೆ ಬಂದಿರುವುದಾಗಿ ಸಿದ್ದರಾಮಯ್ಯ ಹೇಳಿದರು. ಕೃಷ್ಣಗಿರಿ, ಸೇಲಂನಲ್ಲಿ ಶೇ. 60ರಷ್ಟು ಜನರಿಗೆ ಕನ್ನಡ ಗೊತ್ತಿದೆ.ಆದ್ದರಿಂದ ಕನ್ನಡದಲ್ಲಿ ಮಾತನಾಡಿದರೆ ಅವರಿಗೆ ಉತ್ತೇಜನ ಸಿಗುವುದರಿಂದ ಕನ್ನಡದಲ್ಲೇ ಭಾಷಣ ಮಾಡಿದ್ದಾಗಿ ಸಿಎಂ ತಿಳಿಸಿದರು. ಕಳೆದ ಬಾರಿ ಡಿಎಂಕೆ ಜತೆ ಮೈತ್ರಿಯಿತ್ತು.

1 0 0 0
Login to proceed

Cancel

Ok Cancel


Cancel
Hours
Cancel
18 ವರ್ಷದ ಯುವತಿಯ ಮೇಲೆ ಇಬ್ಬರು ದುಷ್ಕರ್ಮಿಗಳಿಂದ ಸಾಮೂಹಿಕ ಅತ್ಯಾಚಾರ

ಇಬ್ಬರು ಯುವಕರಿಂದ 18 ವರ್ಷದ ಯುವತಿ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾದ ಘಟನೆ ಬುಧಾನಾ ನಗರದಲ್ಲಿ ನಿನ್ನೆ ನಡೆದಿದೆ ಎಂದು ಪೋಲಿಸ್ ಮೂಲಗಳು ತಿಳಿಸಿವೆ.

1 0 0 0
Login to proceed

Cancel

Ok Cancel


Cancel
Hours
Cancel
ಲೋಕಸಭೆ ಚುನಾವಣೆ ಫಲಿತಾಂಶ ರಾಜ್ಯದ ಆಡಳಿತಕ್ಕೆ ದಿಕ್ಸೂಚಿಯಲ್ಲ: ಸಿಎಂ

ಕೃಷ್ಣಗಿರಿ: ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದ ಕನಿಷ್ಠ 20 ಸ್ಥಾನಗಳಲ್ಲಿ ಗೆಲವು ಗಳಿಸುವ ವಿಶ್ವಾಸವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಮಿಳುನಾಡಿನ ಕೃಷ್ಣಗಿರಿಯಲ್ಲಿ ಶನಿವಾರ ಹೇಳಿದ್ದಾರೆ. ಮುಖ್ಯಮಂತ್ರಿಯಾಗಿ ನನ್ನ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದೇನೆ. ಚುನಾವಣೆ ಫಲಿತಾಂಶ ರಾಜ್ಯದ ಆಡಳಿತಕ್ಕೆ ದಿಕ್ಸೂಚಿಯಲ್ಲ ಎಂದು ಮುಖ್ಯಮಂತ್ರಿ ತಿಳಿಸಿದರು. ಸಿಎಂ ಸ್ಥಾನದಿಂದ ಕೆಳಗಿಳಿಸುವುದಾಗಿ ಯಾವ ಎಚ್ಚರಿಕೆಯನ್ನೂ ತಮಗೆ ನೀಡಲಾಗಿಲ್ಲ. ಕೃಷ್ಣಗಿರಿ ಸೇರಿ ಮೂರು ಸ್ಥಾನಗಳಲ್ಲಿ ಕಾಂಗ್ರೆಸ್ ಗೆಲ್ಲಲಿದೆ ಎಂದು ಸಿದ್ದರಾಮಯ್ಯ ಭವಿಷ್ಯ ನುಡಿದರು

1 0 0 0
Login to proceed

Cancel

Ok Cancel


Cancel
Hours
Cancel
ಮುಲಾಯಂ ರೇಪಿಸ್ಟ್‌ಗಳ ಬಗ್ಗೆ ಮೃದು ಧೋರಣೆ ಹೊಂದಿದ್ದಾರೆ : ಮೋದಿ ಲೇವಡಿ

ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ವಿರುದ್ಧ ಹರಿಹಾಯ್ದಿರುವ ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಸಾಮಾನ್ಯವಾಗಿ ಎಲ್ಲರೂ ಅತ್ಯಾಚಾರಿಗಳ ವಿರುದ್ಧ ಕಠಿಣ ನಿಲುವನ್ನು ಹೊಂದಿದ್ದರೆ, ಮುಲಾಯಂ ಸಿಂಗ್, ಮೃದುತ್ವವನ್ನು ಹೊಂದಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.

1 0 0 0
Login to proceed

Cancel

Ok Cancel


Cancel
Hours
Cancel
ಹದ್ದಿಗೆ ಡಿಕ್ಕಿ ಹೊಡೆದ ವಿಮಾನ: ಪ್ರಯಾಣಿಕರು ಅಪಾಯದಿಂದ ಪಾರು

ಹುಬ್ಬಳ್ಳಿ: ಮುಂಬೈನಿಂದ ಹುಬ್ಬಳ್ಳಿಗೆ ಬರುತ್ತಿದ್ದ ಸ್ಪೈಸ್ ಜೆಟ್ ವಿಮಾನಕ್ಕೆ ರನ್‌ವೇನಲ್ಲಿ ಹದ್ದು ಡಿಕ್ಕಿಹೊಡೆದು ವಿಮಾನದ ಮುಂಭಾಗ ಜಖಂಗೊಂಡಿದೆ. ಹುಬ್ಬಳ್ಳಿಯ ಏರ್‌ಪೋರ್ಟ್‌ನಲ್ಲಿ ಈ ಘಟನೆ ಸಂಭವಿಸಿದೆ. ವಿಮಾನದಲ್ಲಿ ಸುಮಾರು 65 ಜನರು ಪ್ರಯಾಣಿಸುತ್ತಿದ್ದರು. ಪೈಲಟ್ ಕುಳಿತುಕೊಳ್ಳುವ ವಿಮಾನದ ಮುಂಭಾಗಕ್ಕೆ ಹದ್ದು ಡಿಕ್ಕಿಹೊಡೆಯಿತೆಂದು ಹೇಳಲಾಗಿದೆ. ಇದರಿಂದ ವಿಮಾನದ ಮೂಗಿನ ಭಾಗಕ್ಕೆ ಸ್ವಲ್ಪ ಹಾನಿಯಾಗಿದ್ದು, ವಿಮಾನ ನಿಧಾನವಾಗಿ ರನ್‌ವೇನಲ್ಲಿ ಚಲಿಸುತ್ತಿದ್ದರಿಂದ ಹೆಚ್ಚಿನ ಅನಾಹುತವಾಗಿಲ್ಲ.

1 0 0 0
Login to proceed

Cancel

Ok Cancel


Cancel
Hours
Cancel